`ಸಪ್ನೋಂಕಿ ರಾಣಿ` ಈ ವಾರ ಬಿಡುಗಡೆ
Posted date: 27 Mon, Jul 2015 – 08:35:23 AM

ನಿಮ್ಮ ಕನಸಿನಲ್ಲಿ ಕಾಡಲು ಬರುತ್ತಿದ್ದಾಳೆ ‘ಸಪ್ನೋಂಕಿ ರಾಣಿ’. ಸನ್ ಶೈನ್ ಮೂವೀಸ್ ಅವರ ಚೊಚ್ಚಲ ಸಿನೆಮಾ‘ಸಪ್ನೋಂಕಿ ರಾಣಿ’ ಚಿತ್ರದ ನಿರ್ದೇಶಕ ಎ ಆರ್ ಬಾಬು, ಚಂದ್ರ ಜಿ (ಅಪ್ಪಯ್ಯ) ಟಿ ಗಂಗರಾಜು ಅವರು ಈ ಚಿತ್ರದ ಸಹ ನಿರ್ಮಾಪಕರು. ಅರುಣ್ ಅವರು ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು.
ಐಶ್ವರ್ಯ ಎಂಬ ಮುದ್ದಾದ ಅರಗಿಣಿ ಸೃಜನ್ ಲೋಕೇಶ್ ಅವರ ‘ಸಪ್ನೋಂಕಿ ರಾಣಿ’.  ಅವಿನಾಷ್, ಶೋಬಾರಾಜ್, ಟೆನ್ನಿಸ್ ಕೃಷ್ಣ, ಹೊನ್ನಾವಳ್ಳಿ ಕೃಷ್ಣ, ಮಿತ್ರ, ದಿಲೀಪ್,ಅಶೋಕ್, ಚೇತನ್, ಚಿಕ್ಕಣ್ಣ, ಸೋಯಲ್ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ.
ಛಾಯಾಗ್ರಾಹಕ ಜೆ ಎಸ್ ವಾಲಿ ಅವರು ಡಿಜಿಟಲ್ ಹಾಗೂ ಮಾಮೂಲಿ ಫಿಲ್ಮ್ ಅನ್ನು ಬಳಸಿ ಚಿತ್ರೀಕರಣ ಮಾಡಿದ್ದಾರೆ.  ಧರ್ಮ ವಿಶ್ ಅವರ ರಾಗ ಸಂಯೋಜನೆ, ಸುರೇಶ್ ಅವರ ಸಂಕಲನ, ಮಾಸ್ ಮಾದ ಅವರ ಸಾಹಸ, ಹೈಟ್ ಮಂಜು ಅವರ ನೃತ್ಯ ನಿರ್ದೇಶನ ಇದೆ. ಯೋಗರಾಜ್ ಭಟ್, ವಿ ನಾಗೇಂದ್ರ ಪ್ರಸಾದ್, ವಿ ಮನೋಹರ್, ರವಿಕಿರಣ್ ಅವರ ಸಾಹಿತ್ಯವಿದೆ.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed